Breaking Newsಕರ್ನಾಟಕ ರಾಜಕೀಯ

ನಾಲ್ವರು ಡಿಸಿಎಂ ನೇಮಿಸಿ: ರಾಜಣ್ಣ ಹೇಳಿಕೆಗೆ ದನಿಗೂಡಿಸಿದ ಶಾಸಕ ಬಸವರಾಜ ರಾಯರೆಡ್ಡಿ

ಬೆಂಗಳೂರು: ಹೆಚ್ಚುವರಿ ಡಿಸಿಎಂ ಬೇಡಿಕೆಗೆ ಈಗ ಶಾಸಕ ಬಸವರಾಜ ರಾಯರೆಡ್ಡಿ ಅವರೂ ದನಿಗೂಡಿಸಿದ್ದಾರೆ. ಸಚಿವ ರಾಜಣ್ಣ ಅವರಂತೆ ನಾಲ್ವರು ಡಿಸಿಎಂ ನೇಮಿಸಿ ಎಂದು ರಾಯರಡ್ಡಿ ಹೇಳಿರುವುದು ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಇರುವುದನ್ನು ಪುಷ್ಠೀಕರಿಸಿದೆ.

ಶಾಸಕರು ಹಾಗೂ ಸಚಿವರು ತಮಗೆ ಸಹಕಾರ ನೀಡುತ್ತಿಲ್ಲ ಎಂದು ಪತ್ರ ಬರೆದು ಸುದ್ದಿಯಾಗಿದ್ದ ರಾಯರಡ್ಡಿ ಅವರು ಇದೀಗ ಡಿಸಿಎಂ ನೇಮಕಕ್ಕೆ ಬೇಡಿಕೆ ಇಟ್ಟಿರುವುದು ಮತ್ತೊಂದು ಕಾಂಗ್ರೆಸ್‌ ನಲ್ಲಿ ತಳಮಳ ಸೃಷ್ಟಿಸಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಕಡಿಮೆ ಸ್ಥಾನಗಳು ಬಂದರೆ ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಬಲಹೀನವಾಗಬಹುದು ಎಂದೂ ರಾಯರಡ್ಡಿ ಅವರು ಹೇಳಿದ್ದಾರೆ.

ಈಗ ಡಿ ಕೆ ಶಿವಕುಮಾರ್‌ ಅವರೊಬ್ಬರೇ ಡಿಸಿಎಂ ಆಗಿದ್ದಾರೆ. ಅವರ ಜೊತೆಗೆ ಇನ್ನೂ ಮೂವರು ಡಿಸಿಎಂ ನೇಮಿಸಿ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ರಾಯರಡ್ಡಿ ಅವರು ಹೇಳಿದ್ದಾರೆ.

ನಾಲ್ವರು ಡಿಸಿಎಂ ನೇಮಕದ ಉದ್ದೇಶ ಡಿ ಕೆ ಶಿವಕುಮಾರ್‌ ಅವರನ್ನು ದುರ್ಬಲಗೊಳಿಸಲು ಅಲ್ಲ ಎಂದು ರಾಯರಡ್ಡಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬಂದರೆ ನಮ್ಮ ಸರ್ಕಾರ ಅಸ್ಥಿರಗೊಳ್ಳಬಹುದು ಎಂದರು.

ಮುಂದಿನ ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದೂ ರಾಯರೆಡ್ಡಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button