Breaking Newsಕರ್ನಾಟಕ ರಾಜಕೀಯ

ಆದೇಶಕ್ಕಿಂತ ಮೊದಲೇ ನೀರು ಬಿಟ್ಟು ಈಗ ಪ್ರಧಾನಿಯವರು ಮಧ್ಯಪ್ರವೇಶಿಸಲಿ ಎಂದರೆ ಹೇಗೆ?: ಬಸವರಾಜ ಬೊಮ್ಮಾಯಿ ಪ್ರಶ್ನೆ

ಬೆಂಗಳೂರು: ಆದೇಶ ಬರುವುದಕ್ಕಿಂತ ಮೊದಲೇ ನೀರು ಬಿಟ್ಟು. ಈಗ ಪ್ರಧಾನಿ ಮಧ್ಯ ಪ್ರವೇಶ ಮಾಡಿ ಎಂದರೆ ಹೇಗೆ. ಸುಪ್ರೀಂಕೋರ್ಟ್‌ ನಲ್ಲಿ ರಾಜ್ಯದ ಪರವಾಗಿ ವಾದ ಮಾಡಲು ಏನು ಸಮಸ್ಯೆ ಇವರಿಗೆ ಎಂದು ಪ್ರಶ್ನಿಸಿದರು.

ಕಾವೇರಿ ವಿವಾದ ಸಂಬಂಧ ಮಾತನಾಡಿದ ಅವರು, ನಿಮ್ಮ ರಾಜಕೀಯ ಮಿತ್ರ ಸ್ಟಾಲಿನ್‌ ರನ್ನು ಸಮಾಧಾನ ಪಡಿಸುವುದನ್ನು ಮೊದಲು ನಿಲ್ಲಿಸಿ. ನಿಮಗೆ ಅಧಿಕಾರ ಕೊಟ್ಟಿರುವುದನ್ನು ಜನರ ಪರವಾಗಿ ಬಳಕೆ ಮಾಡುವುದನ್ನು ಕಲಿರಿ ಎಂದು ಹೇಳಿದರು.

ನಾಲ್ಕು ತಿಂಗಳ ಹಿಂದೆ ಅಧಿಕಾರ ಕೊಟ್ಟಿದ್ದಾರೆ. ಮೊದಲು ಜನರ ಹಿತರಕ್ಷಣೆ ಮಾಡುವುದನ್ನು ಕಲಿಯಿರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಿಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ಈಗ ಪ್ರಧಾನಿಯವರ ಕಡೆ ಬೊಟ್ಟು ಮಾಡಿ ತೋರಿಸುತ್ತೀರಿ. ಎರಡು ಪರಿಹಾರಗಳಿವೆ. ಒಂದು ಕಾನೂನಾತ್ಮಕವಾದ ಪರಿಹಾರ ಇನ್ನೊಂದು ರಾಜಕೀಯ ಪರಿಹಾರ. ರಾಜಕೀಯ ಪರಿಹಾರ ಬೇಕಾದರೆ ತಮಿಳುನಾಡಿನ ಸರ್ಕಾರ ಇಂಡಿಯಾದಲ್ಲಿದೆ. ಕಾಂಗ್ರೆಸ್‌ ಸಹ ಇಂಡಿಯಾದಲ್ಲಿದೆ. ಇವೆರಡು ಮಿತ್ರ ಪಕ್ಷಗಳು. ನಿಮ್ಮಸೋನಿಯಾ ಗಾಂಧಿ ಅವರಿಗೆ ಹೇಳಿ ಪರಿಹರಿಸಿಕೊಳ್ಳಿ ಎಂದರು.

ಖರ್ಗೆ ಅವರು ಸೋನಿಯಾ ಗಾಂಧಿ ಅವರ ಬಳಿ ಮಾತನಾಡಿ ರಾಜಕೀಯ ಪರಿಹಾರ ಕಂಡುಕೊಳ್ಳಬಹುದಲ್ವಾ. ನೀರು ಯಾಕೆ ಕೊಡಲು ಆಗಲ್ಲ ಎಂದು ಮನವರಿಕೆ ಮಾಡಿಕೊಡಿ. ಅವರೇಕೆ ಪದೇ ಪದೇ ಸುಪ್ರೀಂಕೋರ್ಟ್‌ಗೆ ಹೋಗುತ್ತಾರೆ. ನೀರು ಬಿಟ್ಟಮೇಲೂ ಅವರು ಕೋರ್ಟ್‌ಗೆ ಯಾಕೆ ಹೋಗಬೇಕು ಎಂದರು.

ನೀರು ಹರಿಸುವುದನ್ನು ನಿಲ್ಲಿಸಲು ಒಂದು ಸುಪ್ರೀಂಕೋರ್ಟ್‌ ಅನುಮತಿ ಬೇಕು, ಇಲ್ಲಾ ತಮಿಳುನಾಡು ಒಪ್ಪಿಕೊಳ್ಳಬೇಕು. ರಾಜಕೀಯ ಪರಿಹಾರ ಕಂಡುಕೊಳ್ಳಿ ಎಂದರು.

Leave a Reply

Your email address will not be published. Required fields are marked *

Back to top button