Breaking Newsಕರ್ನಾಟಕ ರಾಜಕೀಯ

ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧ ಇಲ್ಲ : ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಉದ್ಯಮಿಯೊಬ್ಬರಿಗೆ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೂ ಚೈತ್ರ ವ್ಯವಹಾರಕ್ಕೂ ಸಂಬಂಧ ಇಲ್ಲ. ನಮ್ಮ ಸ್ಪಷ್ಟ ನಿಲುವು ಎಲ್ಲ ರೀತಿಯ ಸಮಗ್ರ ತನಿಖೆ ಆಗಲಿ. ಯಾರೇ ಇದರಲ್ಲಿ ಭಾಗಿಯಾಗಿದ್ದರೂ ಉಗ್ರ ಶಿಕ್ಷೆ ಆಗಲಿ ಎಂದರು.

ಈ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅವರೆಲ್ಲರ ಬಂಧನವಾಗಬೇಕು. ತನಿಖೆಯಿಂದಲೇ ಸತ್ಯ ಹೊರಗೆ ಬರಲಿದೆ. ಸಾಕಷ್ಟು ಜನ ಹೋರಾಟ ಮಾಡುತ್ತಾರೆ. ಅವರಿಗೆಲ್ಲ ನಮ್ಮ ಪಕ್ಷದ ನಂಟು ಇದೆ ಎಂದರೆ ಹೇಗೆ ಎಂದರು.

ಆರೋಪಿಗಳು ಸಿಕ್ಕಿ ಬಿದ್ದಾಗ ಹಲವರ ಹೆಸರು ಹೇಳುವುದು ಸಹಜ. ಆದರೆ ತನಿಖೆಯಿಂದ ಮಾತ್ರವೇ ಎಲ್ಲವೂ ಹೊರ ಬೀಳಲಿದೆ ಎಂದರು.

Leave a Reply

Your email address will not be published. Required fields are marked *

Back to top button