Breaking Newsಸುದ್ದಿ ಸಮಾಚಾರ

“ಬ್ರದರ್” ವಿರುದ್ಧ ತನಿಖೆ ಮಾಡಿಸುತ್ತಾರಾ? ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ??!!: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನೆ

ಬೆಂಗಳೂರು: ಕಮಿಷನ್‌ ಆರೋಪ ಸಂಬಂಧ ಶಾಸಕ ಬಸನಗೌಡ ಯತ್ನಾಳ್‌ ಟ್ವೀಟ್‌ ಮೂಲಕ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಹಗರಣಗಳನ್ನು ನ್ಯಾಯಮೂರ್ತಿಯವರ ನೇತೃತ್ವದ ಆಯೋಗದ ಮೂಲಕ ತನಿಖೆ ಮಾಡಿಸುತ್ತೇವೆ ಎಂದಿದ್ದ ಸಿದ್ದರಾಮಯ್ಯನವರು ಈಗ ಗುತ್ತಿಗೆದಾರರು ಆರೋಪ ಮಾಡಿರುವ ಅವರ “ಬ್ರದರ್” ವಿರುದ್ಧ ತನಿಖೆ ಮಾಡಿಸುತ್ತಾರಾ ? ಎಂದು ಕಾಲೆಳೆದಿದ್ದಾರೆ.

ಗುತ್ತಿಗೆದಾರರು ನೊಣವಿನಕೆರೆ ಅಜ್ಜಯ್ಯನವರ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲೆಸಿರುವುದು ನೋಡಿದರೆ “ಬ್ರದರ್” ಡಿಮ್ಯಾಂಡ್ ಗುತ್ತಿಗೆದಾರರಿಗೆ ಬಹಳ ಸಂಕಷ್ಟಕ್ಕೆ ದೂಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯ ನವರೇ? ಅಥವಾ ನಿಮ್ಮ ಗಮನಕ್ಕೆ ಬಾರದೆ ನಿಮ್ಮ “ಬ್ರದರ್” ನಿಮ್ಮನ್ನೂ ಮೀರಿಸಿದ್ದಾರಾ? ಕ್ರಮಕೈಗೊಳ್ಳುವಿರಾ? ಅಥವಾ ಅವರು ಗುತ್ತಿಗೆದಾರರೇ ಅಲ್ಲ ಅಂತ ಸರ್ಟಿಫಿಕೇಟ್ ನೀಡುತ್ತೀರಾ! ಎಂದು ಕೇಳಿದ್ದಾರೆ.

Leave a Reply

Your email address will not be published. Required fields are marked *

Back to top button