Breaking Newsಸುದ್ದಿ ಸಮಾಚಾರ

ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಹಾಗೂ ಶಾಸಕರ ವಿರುದ್ಧ ಅಪ ಪ್ರಚಾರ | ದೇವರ ಮೊರೆ ಹೋದ ಊರಿನ ಪ್ರಮುಖರು

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಧರ್ಮದೈವದ ಕ್ಷೇತ್ರವನ್ನು ಎಳೆದುಕೊಂಡು, ಕ್ಷೇತ್ರಕ್ಕೆ ಅಪಪ್ರಚಾರವಾಗುವಂತೆ ಮತ್ತು ಬಂಟ್ವಾಳ ಶಾಸಕರ ಹೆಸರನ್ನು ಕೆಡಿಸುವ ರೀತಿಯಲ್ಲಿ ಸುಳ್ಳು ಸುಳ್ಳು ಸುದ್ದಿಗಳನ್ನು ಹಬ್ಬಿರುವ ಇಬ್ಬರು ವ್ಯಕ್ತಿಗಳಿಗೆ ದೈವದೇವರುಗಳು ಸರಿಯಾದ ಶಿಕ್ಷೆ ನೀಡಬೇಕು ಎಂದು ಕಕ್ಯ ಗುತ್ತಿನ ಭಂಡಾರದ ಮನೆಯವರು ಹಾಗೂ ಊರಿನ ಪ್ರಮುಖರು ಸಂಕ್ರಾಂತಿ ದಿನದಂದು ಹರಕೆ ಮಾಡಿದ್ದಾರೆ. ಬಳಿಕ ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೂಡ ಇದೇ ರೀತಿಯಲ್ಲಿ ದೇವರಲ್ಲಿ ಬೇಡಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಕಕ್ಯಪದವು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಕ್ಯೆಪದವು ದೇವಸ್ಥಾನದಿಂದ ಕಕ್ಯೆ ಗುತ್ತಿನ ಭಂಡಾರದ ಮನೆಗೆ ಹೋಗುವ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ರೂ. 10 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಅದರೆ ಇಬ್ಬರು ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ಸಮಿತಿಯ ಗಮನಕ್ಕೆ ತರದೆ ಈ ರಸ್ತೆಯ ಬಗ್ಗೆ ತಪ್ಪು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ಇದರಿಂದ ದೈವದ ಭಂಡಾರದ ಮನೆಯ ಮರ್ಯಾದೆಯನ್ನು ಕೆಡಿಸಿದ್ದಾರೆ.

ಜೊತೆಗೆ ಶಾಸಕರು ನೀಡಿದ ಭರವಸೆಯಂತೆ ರಸ್ತೆಗೆ ಕಾಂಕ್ರೀಟ್ ಮಾಡಿದ ಬಳಿಕ ಇ ರೀತಿಯಲ್ಲಿ ಸುಳ್ಳು ಹೇಳಿಕೆಯನ್ನು ನೀಡಿರುವ ವ್ಯಕ್ತಿಗಳು ಅಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾರೆ, ಇದು ಸರಿಯಲ್ಲ ಮತ್ತು ಇವರ ಹೇಳಿಕೆಗಳು ಸತ್ಯಕ್ಕೆ ದೂರವಾದುದು‌. ಇವರನ್ನು ನಾವು ಕ್ಷಮಿಸಲ್ಲ ಇಬ್ಬರಿಗೂ ಇಲ್ಲಿನ ದೈವಶಕ್ತಿಗಳು ಶಿಕ್ಷೆ ನೀಡಬೇಕು ಎಂದು ದೈವದ ಮುಂದೆ ಇಲ್ಲಿನ ಭಂಡಾರದ ಮನೆಯ ದೈವದ ಪ್ರಮುಖ ಪಾತ್ರಿ ಶೇಖರ ಪೂಜಾರಿ ಪ್ರಾರ್ಥನೆ ಮಾಡಿದ್ದಾರೆ.

ಕಕ್ಯೆಪದವು ದೇವಸ್ಥಾನದ ಮುಂಭಾಗದ ರಸ್ತೆಗೆ ಕಾಂಕ್ರೀಟ್ ಮಾಡುವ ವೇಳೆ ಇಲ್ಲಿನ ಸ್ಥಳಿಯ ಬಿಜೆಪಿ ಪ್ರಮುಖರಲ್ಲಿ ಕೇಳಿಕೊಂಡ ಮೇರೆಗೆ ಕೇವಲ ಒಂದುವರೆ ತಿಂಗಳಲ್ಲಿ ಕಕ್ಯೆ ಗುತ್ತಿನ ಭಂಡಾರದ ಮನೆಗೆ ಹೋಗುವ ಸಂಪರ್ಕ ರಸ್ತೆಗೆ 10 ಲಕ್ಷ ಅನುದಾನದ ಮೂಲಕ ಕಾಂಕ್ರೀಟ್ ನಡೆಸುವ ಮೂಲಕ ಉದಾರತೆ ಮೆರೆದಿದ್ದಾರೆ. ಅ ಬಳಿಕ ಸುಮಾರು 1.25 ಲಕ್ಷ ಅನುದಾನದ ಮೂಲಕ ಕ್ಷೇತ್ರಕ್ಕೆ ದಾರಿ ದೀಪವನ್ನು ಒದಗಿಸಿಕೊಟ್ಟಿದ್ದಾರೆ.ಅದರ ಜೊತೆ ಇಲ್ಲಿನ ಬ್ರಹ್ಮ ಕಲಶೋತ್ಸವ ವೇಳೆ ವೈಯಕ್ತಿಕ ಸಹಾಯವನ್ನು ಮಾಡಿದ್ದಾರೆ. ಇದರ ಜೊತೆಗೆ ಭಂಡಾರದ ಮನೆಗೆ ಬರುವ ದಾರಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ವರ್ಗ ಜಮೀನಲ್ಲಿ ರಸ್ತೆಯೊಂದಿದ್ದು ಇದಕ್ಕೆ ಕಾಂಕ್ರೀಟ್ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದಾಗ, ಖಾಸಗಿ ಜಮೀನಿನಲ್ಲಿ ಈ ರಸ್ತೆ ಇರುವುದರಿಂದ ಸರಕಾರದ ನಿಯಮ ಪ್ರಕಾರ ರಸ್ತೆಯ ಹಕ್ಕನ್ನು ಗ್ರಾಮಪಂಚಾಯತ್ ಗೆ ವರ್ಗಾಯಿಸಿ ಕೂಡಲೇ ಶಾಸಕರ ನಿಧಿಯಿಂದ ಕಾಂಕ್ರೀಟ್ ಕಾಮಗಾರಿ ಮಾಡಿಕೊಡುತ್ತೇನೆ ಎಂಬ ಭರವಸೆ ನೀಡಿದ್ದಾರೆ.

ಆದರೆ ಕುಟುಂಬದ ಒರ್ವ ಹಾಗೂ ಇಲ್ಲಿಗೆ ಸಂಬಂಧಪಡದ ವ್ಯಕ್ತಿಗಳಿಬ್ಬರು ಸೇರಿ ಕ್ಷೇತ್ರಕ್ಕೆ ಹಾಗೂ ಶಾಸಕರಿಗೆ ಅಪಪ್ರಚಾರ ಮಾಡಿದ ಬಳಿಕ ನಾವು ಶಾಸಕರ ಬಳಿ ಹೇಗೆ ಹೋಗುವುದು ಎಂಬ ಚಿಂತೆ ನಮಗೆ ಶುರುವಾಗಿದೆ. ಎಂದು ದೈವದ ಜೀರ್ಣೊಧ್ದಾರ ಸಮಿತಿ ಸದಸ್ಯ ಪ್ರಭಾಕರ್ ಅಂಚನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ್ ನಾಲೋಡಿ ಹಾಗೂ ಸಮಿತಿಯ ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

Back to top button