Breaking Newsಸಚಿವರ ಕಚೇರಿಯಿಂದ

ಸಿಎಂ ಹಾಗೂ ಡಿಸಿಎಂ ನಡುವೆ ಯಾವುದೇ ಪೈಪೋಟಿ ಇಲ್ಲ | ಪಕ್ಷದ ತತ್ವ ಹಾಗೂ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ: ಸಚಿವ ಬಿ ನಾಗೇಂದ್ರ

ಬೆಂಗಳೂರು: ಪಕ್ಷದ ಸಿದ್ದಾಂತ ಒಪ್ಪಿ ಬಂದರೆ ಸ್ವಾಗತ. ಲೋಕಸಭಾ ಚುನಾವಣೆಯಲ್ಲೂ ನಾವು ಭರ್ಜರಿ ಗೆಲುವು ಸಾಧಿಸುತ್ತೇವೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ ಹೇಳಿದರು.

ಬೆಂಗಳೂರಿನಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಬೇರೆ ಪಕ್ಷದವರು ಯಾರಾದರೂ ಬಂದರೆ ಸ್ವಾಗತ ಮಾಡ್ತೇವೆ ಎಂದು ಹೇಳಿದರು.

ಯಾರನ್ನು ಯಾವ ರೀತಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಪಕ್ಷ ನಿರ್ಧಾರ ಮಾಡುತ್ತೆ. ನಮಗೆ ಯಾವ ಹಪಾಹಪಿ ಇಲ್ಲ. ಅವರಾಗೇ ಬಂದು ಸೇರುತ್ತೇವೆ ಎಂದರೆ ನಾವು ಸೇರಿಸಿಕೊಳ್ಳಬೇಕು. ನಾವೆಲ್ಲ ಒಂದಾಗಿದ್ದೇವೆ. ನಮ್ಮ ಶಾಸಕರು ಒಗ್ಗಟ್ಟಾಗಿದ್ದೇವೆ. ಒಳ್ಳೆ ಹೆಸರು ಮಾಡ್ತೇವೆ. ಭರವಸೆ ನೀಡಿದಂತೆ ಗ್ಯಾರಂಟಿಗಳನ್ನು ಜಾರಿ ಮಾಡ್ತ ಇದ್ದೇವೆ. ಇಡೀ ದೇಶವೇ ನಮ್ಮ ಸರ್ಕಾರವನ್ನು ಹೊಗಳುತ್ತಿದೆ. ಬಡವರಿಗಾಗಿ ಒಳ್ಳೆ ಸರ್ಕಾರ ಮಾಡ್ತಿದ್ದೀವಿ ಎಂದರು.

ಬೇರೆ ಪಕ್ಷದ ಶಾಸಕರು ನಮ್ಮ ಪಕ್ಷ ಸೇರುತ್ತೇವೆ ಅಂತಿದ್ದಾರೆ. ಅವರಿಗೆ ಅಲ್ಲಿ ಏನು ಸಮಸ್ಯೆ ಆಗಿದೆಯೊ ಗೊತ್ತಿಲ್ಲ. ಅವರ ಅಳಲು ತೋಡಿಕೊಂಡಾಗ ನಾವು ಸ್ಪಂದಿಸಬೇಕಾಗುತ್ತದೆ, ಯಾರಿಗೂ ಒತ್ತಾಯ ಮಾಡುತ್ತಿಲ್ಲ. ಮನೆಗೆ ಹೋಗಿ ನಮ್ಮ ಪಕ್ಷಕ್ಕೆ ಸೇರಿ ಅಂತ ಹೇಳುತ್ತಿಲ್ಲ.

ಸಿಎಂ, ಡಿಸಿಎಂ ನಡುವೆ ಯಾವುದೇ ಪೈಪೋಟಿ ಇಲ್ಲ. ಸಮನ್ವಯ ಇಲ್ಲ ಎಂಬುದೆಲ್ಲ ಸುಳ್ಳು. ನಮ್ಮ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸುತ್ತಿದೆ ಎಂದರು.

Leave a Reply

Your email address will not be published. Required fields are marked *

Back to top button