Breaking Newsಕರ್ನಾಟಕ ರಾಜಕೀಯ

ಕುತೂಹಲ ಮೂಡಿಸಿದ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್‌ ನಾಯಕ ಆಯನೂರು ಮಂಜುನಾಥ್ ಭೇಟಿ

ಬೆಂಗಳೂರು: ಜೆಡಿಎಸ್ ಮುಖಂಡ, ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಅವರು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಪಕ್ಷಾಂತರ ಪರ್ವ, ಆಪರೇಷನ್ ಹಸ್ತ, ಆಪರೇಷನ್ ಕಮಲದ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಉಭಯ ನಾಯಕರ ಬೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆಯನೂರು ಮಂಜುನಾಥ್ ಮೂರು ಪಕ್ಷ ಗಳಲ್ಲಿ ಗುರುತಿಸಿಕೊಂಡು, ಮರಳಿ ಕಾಂಗ್ರೆಸ್ ಪಕ್ಷದ ಒಲವು ಹೊಂದಿರಬಹುದಾದ ಸಾಧ್ಯತೆಗಳು ತಳ್ಳಿಹಾಕುವಂತಿಲ್ಲ.

Leave a Reply

Your email address will not be published. Required fields are marked *

Back to top button