Breaking Newsಸುದ್ದಿ ಸಮಾಚಾರ

ಚಂದ್ರಯಾನ3 ಯಶಸ್ವಿ | ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು| ಈಡೇರಿದ ಕೋಟ್ಯಾಂತರ ಭಾರತೀಯರ ಪ್ರಾರ್ಥನೆ

ಬೆಂಗಳೂರು: ಕೋಟ್ಯಾಂತರ ಭಾರತೀಯರ ಕಾತುರತೆಗೆ ತೆರ ಬಿದ್ದಿದ್ದು, ಎದೆಯಲ್ಲಿ ಶುರುವಾಗಿದ್ದ ಡವ ಡವ ಸದ್ದು, ಆನಂದ ಬಾಷ್ಪ ಸ್ವರೂಪ ಪಡೆದಿದೆ. 2019ರ ಸೆಪ್ಟೆಂಬರ್ 6ರಂದು ಉಂಟಾಗಿದ್ದ ಆಘಾತ, ಸೋಲಿನ ನೋವು, ಹತಾಶೆಯ ನೆನಪು ಮಾಯವಾಗಿ, ಜನರ ಪ್ರಾರ್ಥನೆಗೆ ಗೆಲುವು ದೊರೆತಿದೆ. ಇಸ್ರೋ ಗೆದ್ದು ಬೀಗಿದೆ.


ಸುಮಾರು 20 ನಿಮಿಷಗಳು ಬಹುಶಃ ಪ್ರತಿಯೊಬ್ಬರ ಎದೆಬಡಿತ ಜೋರಾಗಿ, ಕುರ್ಚಿಯ ತುದಿಯಲ್ಲಿ ಕುಳಿತು, ಮುಂದೇನಾಗಲಿದೆ ಎಂದು ಚಡಪಡಿಸುವ ಅನುಭವವಾಗಿದೆ. ಮುಂದೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಮಹತ್ವದ ಕಾರ್ಯ ಮುಗಿಯುತ್ತಿದ್ದಂತೆ, ಜನರ ಹರ್ಷೋದ್ಘಾರ ಮುಗಿಲು‌ ಮುಟ್ಟಿದೆ.

ಕಾತರರಾಗಿರುವ ಜನರು ಒಂದೆಡೆಯಾದರೆ, 140 ಕೋಟಿ ಭಾರತೀಯರ ನಿರೀಕ್ಷೆಯ ಭಾರವನ್ನು ಹೊತ್ತ ಇಸ್ರೋ ವಿಜ್ಞಾನಿಗಳ ಕಣ್ಣಂಚಲಿ ನೀರಿನ ಸಿಂಚನವಾಯಿತು. ಕಳೆದ ವಾರ ರಷ್ಯಾದ ಲೂನಾರ್ 25 ಪತನವು‌, ಇಡೀ ಪ್ರಪಂಚದ ದೃಷ್ಟಿ ಭಾರತದ ಚಂದ್ರಯಾನದ ಕಡೆಗೆ ತಿರುವುಗಿರುವವುದು ಕೂಡ, ವಿಜ್ಞಾನಿಗಳಿಗೆ ಒತ್ತಡ ಉಂಟು ಮಾಡಿರಬಹುದು. ಆದರೆ ಕೋಟ್ಯಾಂತರ ಹೃದಯಗಳ ಪ್ರಾರ್ಥನೆಗೆ ಫಲ ಸಿಕ್ಕಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಧಾನಿ ಮೋದಿಯವರು 2019 ರಿಂದ ‌ಇಸ್ರೋ ವಿಜ್ಞಾನಿಗಳ ಬೆನ್ನೆಲುಬಾಗಿ ನಿಂತಿರುವುದು, ಅವರ ಆತ್ಮ‌ ವಿಶ್ವಾಸ ಹೆಚ್ಚಿಸಿದೆ. ಭಾರತದ ಸಾಧನೆಯ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಹರಡಿದೆ.

Leave a Reply

Your email address will not be published. Required fields are marked *

Back to top button